   ಮೂಲದೊಡನೆ ಪರಿಶೀಲಿಸಿ
ಎಲೆಕ್ಟ್ರಾನ್ ದೃಕ್‍ಶಾಸ್ತ್ರ

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ

ಎಲೆಕ್ಟ್ರಾನ್ ಕಿರಣಗಳ ಪ್ರಸಾರವನ್ನು ವಿವರಿಸುವ ಭೌತಶಾಸ್ತ್ರದ ವಿಭಾಗ. 1926ರಲ್ಲಿ ಬುಷ್ ಎಂಬಾತ ಎಲೆಕ್ಟ್ರಾನ್ ಮಸೂರಗಳ ಕ್ರಿಯೆಯನ್ನು ಸೈದ್ಧಾಂತಿಕವಾಗಿ ವಿವರಿಸಿದ ಮೇಲೆ ಈ ಶಾಸ್ತ್ರದ ಬೆಳವಣಿಗೆ ಪ್ರಾರಂಭವಾಯಿತು.
ಕನಿಷ್ಠ ಕ್ರಿಯೆ ಮತ್ತು ಫರ್ಮನ ನಿಯಮಗಳನ್ನು ಒಟ್ಟಿಗೆ ಪರೀಕ್ಷಿಸಿದರೆ ಸಂವೇಗ (ಮೊಮೆಂಟಂ) ಮತ್ತು ವಕ್ರೀಭವನ ಸೂಚ್ಯಂಕ ಕ್ರಮವಾಗಿ ಗತಿಶಾಸ್ತ್ರ ಮತ್ತು ದೃಕ್‍ಶಾಸ್ತ್ರದಲ್ಲಿ ಸಮಾನಪಾತ್ರಗಳನ್ನು ನಿರ್ವಹಿಸುವುದು ತಿಳಿಯುತ್ತದೆ. ಎಲೆಕ್ಟ್ರಾನ್ ಒಂದು ಕ್ಷೇತ್ರದಿಂದ ಇನ್ನೊಂದು ಕ್ಷೇತ್ರಕ್ಕೆ ಹಾದುಹೋಗುವುದನ್ನು ಚಿತ್ರದಲ್ಲಿ ತೋರಿಸಿದೆ. ಕನಿಷ್ಠ ಕ್ರಿಯೆ ನಿಯಮದಂತೆ ಚಿತ್ರದ ಜ್ಯಾಮಿತಿಯನ್ನನುಸರಿಸಿ,
    . . . . .  (1)            

ಎಂದುಬರೆಯಬಹುದು. ಅನಂತರ               . . . . .  (2)            
ಎಂದು ಬರೆಯುವುದು ಸುಲಭ.  ಮತ್ತು   ಪತನಕೋನ ಮತ್ತು ವಕ್ರೀಭವನಕೋನ.

ಚಿತ್ರ-1

 ಮತ್ತು  ಕ್ಷೇತ್ರ (2) ಮತ್ತು (1) ರಲ್ಲಿ ಕ್ರಮವಾಗಿ ಎಲೆಕ್ಟ್ರಾನಿನ ಸಂವೇಗ (1 ಮತ್ತು (2 ಗಳು ಕ್ರಮವಾಗಿ ಕ್ಷೇತ್ರ (1) ಮತ್ತು (2)ರ ವಕ್ರೀಭವನ ಸೂಚಿಗಳಾದರೆ ಫರ್ಮ ನಿಯಮದಂತೆ  . . . . (3)
ಎಂದು ತೋರಿಸಬಹುದು, ಸಮೀಕರಣ (2) ಮತ್ತು (3) ಸಂವೇಗ ಮತ್ತು ವಕ್ರೀಭವನ ಸೂಚಿಗಳಿಗಿರುವ ಸಾಮ್ಯವನ್ನು ತೋರಿಸುತ್ತವೆ. 
ಗಾಜು, ನೀರು ಮುಂತಾದ ಪಾರದರ್ಶಕಗಳು ಬೆಳಕಿನ ಕಿರಣಗಳನ್ನು ಬಾಗಿಸುವಂತೆ ವಿದ್ಯುತ್ ಮತ್ತು ಕಾಂತಕ್ಷೇತ್ರಗಳು ಎಲೆಕ್ಟ್ರಾನ್ ಕಿರಣಗಳನ್ನು ಬಾಗಿಸುತ್ತವೆ.

ಚಿತ್ರ-2

ಅಕ್ಷಸಮವಿರುವ ಸ್ಥಿರ ವಿದ್ಯುತ್ ಕ್ಷೇತ್ರ ಎಲೆಕ್ಟ್ರಾನ್ ಮಸೂರದಂತೆ ವರ್ತಿಸುತ್ತದೆ. ಈ ಮಾತಿನ ಯಾಥಾಥ್ರ್ಯವನ್ನು ತಿಳಿಯಲು ಚಿತ್ರದಲ್ಲಿ ನಿರೂಪಿಸಿರುವ ಎಲೆಕ್ಟ್ರಾನಿನ ಚಲನೆಯನ್ನು ಗಮನಿಸಿ. ವಿಭವದ ವ್ಯತ್ಯಾಸ  ಮಿತಿಯಲ್ಲಿ ಮಾತ್ರ ಆಗುತ್ತದೆ. ಇದರಿಂದ ಹೊರಗೆ ಎರಡೂ ಕಡೆಯಲ್ಲಿ ಎಲೆಕ್ಟ್ರಾನುಗಳು ಸರಳರೇಖೆಯಲ್ಲಿ ಚಲಿಸುತ್ತವೆ. ಕೋನ ( ದ ಮೌಲ್ಯ ಬಹಳ ಕಡಿಮೆಯಾಗಿದ್ದರೆ
          . . . . .(4)
ಎಂದು ಬರೆಯಬಹುದು. ಅಕ್ಷಕ್ಕೆ ಅತಿ ಸಮೀಪದಲ್ಲಿ ಹಾಯುವ ಎಲೆಕ್ಟ್ರಾನುಗಳ ಪಥವನ್ನು ಈ ಸಮೀಕರಣ ವಿವರಿಸುತ್ತದೆ. ಆದ್ದರಿಂದ ಇದನ್ನು ಉಪಾಕ್ಷ ಸಮೀಕರಣ ಎಂದು ಕರೆಯುತ್ತಾರೆ.  ಆದಾಗ  
                              . . . . .(5)
ಎಂದು ಬರೆಯಬಹುದು. ಇಲ್ಲಿ  ಮತ್ತು  ಗಳು  ನ ಉತ್ಪನ್ನಗಳು.

ಚಿತ್ರ-3

ಈಗ ಮಸೂರದ ಕೆಲಸವನ್ನು ತಿಳಿಯುವುದು ಸುಲಭ. ಚಿತ್ರದಲ್ಲಿ ಪಥ (1)ಮತ್ತು (2)ನ್ನು ಗಮನಿಸಿ ಪಥ (1)ಕ್ಕೆ ಸಂಬಂಧಿಸಿದಂತೆ ಸಮೀಕರಣ (5)ನ್ನು 		              . . . . .(6)
ಎಂದೂ ಪಥ (2)ಕ್ಕೆ ಸಂಬಂಧಿಸಿದಂತೆ ಅದನ್ನು 
                                                          . . . . .(7)
ಎಂದೂ ಬರೆಯಬಹುದು. (6) ಮತ್ತು (7) ರ ಬಲಪಕ್ಷಗಳನ್ನು ಸಮೀಕರಿಸಿ
                                             . . . . .(8)
ಎಂದೂ ಬರೆಯಬಹುದು. (8) ರಿಂದ 
                                                                . . . . .(9)
ಎಂದು ಬರೆಯಬಹುದು. 

ಚಿತ್ರ-4

ಇದು ಎರಡನೆ ಪಥದ ಓಟವನ್ನು ಅವಲಂಬಿಸಿಲ್ಲವೆಂದು ಸ್ಪಷ್ಟವಾಗಿ ತಿಳಿಸುತ್ತದೆ.  ಯಿಂದ ಹೊರಡುವ ಎಲ್ಲ ಕಿರಣಗಳೂ ಅವುಗಳ ಓಟಗಳೂ ಬೇರೆ ಬೇರೆಯಾಗಿದ್ದರೂ ಪ್ರತಿಬಿಂಬಕ್ಷೇತ್ರದಲ್ಲಿ  ಬಳಿ ಸಂಧಿಸುತ್ತವೆ. ವಸ್ತು ಕ್ಷೇತ್ರದ ಪ್ರತಿಬಿಂದುವಿಗೂ ತಕ್ಕಂತೆ ಪ್ರತಿಬಿಂಬಕ್ಷೇತ್ರದಲ್ಲಿ ಒಂದು ಬಿಂದು ಮೂಡುತ್ತದೆ ಲಂಬನ  ಯನ್ನು ಮಾತ್ರ ಅವಲಂಬಿಸಿರುವುದರಿಂದ ಅಕ್ಷಕ್ಕೆ ಲಂಬವಾಗಿರುವ ಯಾವುದೇ ಎರಡು ಅನುವರ್ತಿ (ಕಾಂಜುಗೇಟ್) ಸಮತಳಗಳಲ್ಲಿ ಅದು ಸ್ಥಿರಮೌಲ್ಯವನ್ನು ಹೊಂದಿರುತ್ತದೆ.
ಅಕ್ಷಸಮ ಸ್ಥಿರ ವಿದ್ಯುತ್ ಕ್ಷೇತ್ರಗಳು ಎಲೆಕ್ಟ್ರಾನ್ ಮಸೂರಗಳಂತೆ ವರ್ತಿಸುವುದರಿಂದ ವಿವಿಧ ಎಲೆಕ್ಟ್ರೋಡುಗಳ ಜೋಡಣೆಯಿಂದ ಬೇಕಾದ ಮಸೂರಗಳನ್ನು ಮಾಡಿಕೊಳ್ಳಬಹುದು 
(i) ಏಕರಂಧ್ರಮಸೂರ, ಅತಿ ಸಾಮಾನ್ಯವಾದ ಮಸೂರವೆಂದರೆ ಎರಡು ವಿಭವ ಕ್ಷೇತ್ರಗಳನ್ನು ಬೇರ್ಪಡಿಸುವ ಒಂದು ವಾಹಕ ತಟ್ಟೆಯಲ್ಲಿನ ರಂಧ್ರ. ಇದರ ರಚನೆ ಮತ್ತು ಕೆಲಸವನ್ನು ವಿಶೇಷವಾಗಿ ಅಭ್ಯಾಸಮಾಡಿರುವ ಡೇವಿಸನ್ ಮತ್ತು ಕ್ಯಾಲ್ಸಿಕ್ ಅವರು ಮಸೂರದ ನಾಭಿ ದೂರ ಎಂದು ತೋರಿಸಿದ್ದಾರೆ.   ಮತ್ತು ಗಳು ವೋಲ್ಟಿನಲ್ಲಿ ವಿಭವದ ಮೌಲ್ಯಗಳು.
           . . . . .(10)

ಚಿತ್ರ-5

ii) ಕೊಳವೆ ಮಸೂರ. ಒಂದೇ ಅಕ್ಷವುಳ್ಳ ಬೇರೆ ಬೇರೆ ವಿಭವಗಳಿರುವ ಎರಡು ಕೊಳವೆಗಳು ಮಸೂರದಂತೆ ವರ್ತಿಸುತ್ತವೆ. ಇದರಲ್ಲಿ ಎರಡನೆಯ ನಾಭಿ ದೂರ  ಯಾವಾಗಲೂ  ಕ್ಕಿಂತ ಹೆಚ್ಚಾಗಿರುತ್ತದೆ. ಎರಡನೆಯ ಪ್ರಮುಖಬಿಂದು  ಕೊಳವೆಗಳ ಮಧ್ಯದ ಸಮತಲಕ್ಕೆ ಎಡಭಾಗದಲ್ಲಿರುತ್ತದೆ.  ಹೆಚ್ಚಾದರೆ  ಕಡಿಮೆಯಾಗುತ್ತದೆ. ಕೊಳವೆ ಮಸೂರಗಳನ್ನು ಎಲೆಕ್ಟ್ರಾನ್ ದೃಗುಪಕರಣಗಳಲ್ಲಿ ವಿಶೇಷವಾಗಿ ಬಳಸುತ್ತಾರೆ.
(iii) ಏಕವಿಭವ ಮಸೂರ (ಯೂನಿಪೊಟೆನ್ಷಿಯಲ್ ಲೆನ್ಸ್). ಎಲೆಕ್ಟ್ರಾನ್ ಸೂಕ್ಷ್ಮದರ್ಶಿಗಳಿಗೆ ಬಹುಮುಖ್ಯವಾಗಿ ಬೇಕಾದ ಮಸೂರ ಇದು. ಇದರಲ್ಲಿ ಮೂರು ಏಕಾಕ್ಷಿ ರಂಧ್ರಗಳಿವೆ. ಹೊರಗಿನ ರಂಧ್ರಗಳ ವಿಭವ ಒಂದೇ ಮೌಲ್ಯದ್ಧಾಗಿರುತ್ತದೆ.

ಚಿತ್ರ-6

ಮಧ್ಯ ರಂಧ್ರದ ವಿಭವ ಇದಕ್ಕಿಂತ ಹೆಚ್ಚಾಗಿರಲಿ ಅಥವಾ ಕಡಿಮೆಯಾಗಿರಲಿ ಏಕವಿಭವ ಮಸೂರ ಯಾವಾಗಲೂ ಅಭಿಸರಿಸುವ (ಕನ್ವರ್ಜಿಂಗ್) ಮಸೂರದಂತೆಯೆ ವರ್ತಿಸುತ್ತದೆ. ಇದರ ರಚನೆಯನ್ನು ಚಿತ್ರದಲ್ಲಿ ನೋಡಬಹುದು.
ಏಕವಿಭವ ಮಸೂರದ ನಾಭಿದೂರದ ಮೇಲೆ ಪ್ರಭಾವ ಬೀರುವ ಪ್ರಾಚಲಗಳು (ಪ್ಯರಾಮೀಟರ್ಸ್) ಒಳಗಿನ ರಂಧ್ರದ ವ್ಯಾಸ, ಎಲೆಕ್ಟ್ರೋಡುಗಳಿಗಿರುವ ದೂರ ಮತ್ತು ಮಧ್ಯದ ಎಲೆಕ್ಟ್ರೋಡಿನ ದಪ್ಪ. ಹೊರಗಿನ ರಂಧ್ರಗಳ ವ್ಯಾಸದ ಪ್ರಭಾವ ಅಷ್ಟಿಲ್ಲ. ಒಳಗಿನ ರಂಧ್ರದ ವ್ಯಾಸ ಕಡಿಮೆಯಾದಂತೆ ನಾಭಿದೂರ ಕೂಡ ಕಡಿಮೆಯಾಗುತ್ತದೆ.
ಅಕ್ಷಸಮಾಂಗ ಸ್ಥಿರ ವಿದ್ಯುತ್ ಕ್ಷೇತ್ರಗಳಂತೆ ಅಕ್ಷಸಮಾಂಗಕಾಂತಕ್ಷೇತ್ರಗಳೂ ಎಲೆಕ್ಟ್ರಾನ್ ಮಸೂರಗಳಂತೆ ವರ್ತಿಸುತ್ತವೆ. ಸ್ಥಿರ ವಿದ್ಯುತ್ ಕ್ಷೇತ್ರದಲ್ಲಿ ಎಲೆಕ್ಟ್ರಾನನ್ನು ಬಾಗಿಸುವ ಬಲ ಕ್ಷೇತ್ರದ ದಿಕ್ಕಿನಲ್ಲಿ ವರ್ತಿಸುತ್ತದೆ. ಆದರೆ ಕಾಂತಕ್ಷೇತ್ರದಲ್ಲಿ ಇದು ಎಲೆಕ್ಟ್ರಾನಿನ ಚಲನೆಯ ದಿಕ್ಕು ಮತ್ತು ಕ್ಷೇತ್ರದ ದಿಕ್ಕುಗಳನ್ನೊಳಗೊಂಡ ಸಮತಲಕ್ಕೆ ಲಂಬವಾಗಿರುತ್ತದೆ. ಈ ಕಾರಣದಿಂದ ಕಾಂತಮಸೂರದಿಂದ ಮೂಡುವ ಪ್ರತಿಬಿಂಬ 180o ಗಳಿಗಿಂತ ಹೆಚ್ಚಾಗಿ ತಿರುಗುತ್ತದೆ. ಇದನ್ನು ಚಿತ್ರದಲ್ಲಿ ನೋಡಬಹುದು.

ಚಿತ್ರ-7

ಕಾಂತ ಮಸೂರದಲ್ಲಿ ಪ್ರತಿಬಿಂಬ 180o ಗಿಂತ ಹೆಚ್ಚು ತಿರುಗುವುದನ್ನೂ ಗಮನದಲ್ಲಿಟ್ಟುಕೊಂಡರೆ
   . . . . .(11)
  . . . . .(12)
ಎಂದು ಬರೆಯಬಹುದು. ಇಲ್ಲಿ   ಎಂಬ ಸಾಮ್ಯವನ್ನು ಉಪಯೋಗಿಸಿಕೊಂಡಿದೆ.  ಎಲೆಕ್ಟ್ರಾನಿನ ಜಡಮಾನ,  ಎಲೆಕ್ಟ್ರಾನ್ ಹಾಯ್ದು ಬಂದಿರುವ ವಿಭವಾಂತರ. ಸಾಮಾನ್ಯವಾಗಿ ಬಳಸುವ ಕಾಂತ ಮಸೂರಗಳಲ್ಲಿ ಕ್ಷೇತ್ರದ ಹಂಚಿಕೆ ಗಂಟೆಯ ಆಕೃತಿಯಲ್ಲಿರುತ್ತದೆ. ಚಿತ್ರದಲ್ಲಿ ಇಂಥ ಹಂಚಿಕೆಯನ್ನು ನೋಡಬಹುದು. ಇದನ್ನು ಸಮೀಕರಣದ ರೂಪದಲ್ಲಿ 
   ……(13)
ಎಂದು ಬರೆಯಬಹುದು. ಇಷ್ಟಾದರೆ ಸಮೀಕರಣ (11) ರಿಂದ
      ....(14)
ಎಂದು ಬರೆಯಬಹುದು.

ಚಿತ್ರ-8

 ಇದನ್ನು ಸಮೀಕರಣ (5) ರೊಂದಿಗೆ ಹೋಲಿಸಿ ನೋಡಿದರೆ ಕಾಂತಕ್ಷೇತ್ರ ಸ್ಥಿರವಿದ್ಯುತ್ ಕ್ಷೇತ್ರದಂತೆಯೇ ಮಸೂರದ ಕೆಲಸ ಮಾಡುತ್ತದೆಂಬುದು ಮನದಟ್ಟಾಗುತ್ತದೆ. ನಾಭಿದೂರ ಮಸೂರದ ವ್ಯಾಪ್ತಿ  ಗಿಂತ ಹೆಚ್ಚಾಗಿರುವ ಸನ್ನಿವೇಶವನ್ನು ಗಮನದಲ್ಲಿಟ್ಟುಕೊಂಡು
         ………(15)
        ………(16)
ಎಂದು ತೋರಿಸಬಹುದು. ಇಂಥ ಮಸೂರಗಳನ್ನು ತೆಳುಮಸೂರಗಳೆಂದು ಕರೆಯುತ್ತಾರೆ.
ಎಲೆಕ್ಟ್ರಾನ್ ಸೂಕ್ಷ್ಮದರ್ಶಿಗಳಲ್ಲಿ ಕಾಂತಮಸೂರಗಳ ಉಪಯೋಗವೇ ಹೆಚ್ಚು. ಮೃದು ಕಬ್ಬಿಣದ ದಪ್ಪ ಹೊದಿಕೆಯುಳ್ಳ ತಾಮ್ರದ ತಂತಿಯ ಕೊಳವೆ ಸಿಂಬಿಗಳು ಅವುಗಳಲ್ಲಿ ವಿದ್ಯುತ್ ಪ್ರವಹಿಸಿದಾಗ ಕಾಂತ ಮಸೂರಗಳಂತೆ ವರ್ತಿಸುತ್ತವೆ. ವಿದ್ಯುತ್ ಪ್ರವಾಹದ ಪ್ರಮಾಣವನ್ನು ಹೆಚ್ಚು ಕಡಿಮೆ ಮಾಡುವುದರಿಂದ ನಾಭಿದೂರವನ್ನು ಹೆಚ್ಚು ಕಡಿಮೆ ಮಾಡಬಹುದು. ಕಾಂತಕ್ಷೇತ್ರ ಒಂದು ನಿದಿಷ್ರ್ಟ ಪರಿಮಿತಿಯಲ್ಲಿ ವರ್ತಿಸುವಂತೆ ಮಾಡಲು ಮೃದುಕಬ್ಬಿಣದ ಹೊದಿಕೆಯಲ್ಲಿ ಸಂದುಗಳನ್ನು ಕತ್ತರಿಸಿರುತ್ತಾರೆ. ಈ ಸಂದಿನ ರಚನೆ, ಅದರ ಅಗಲ ಮತ್ತು ಸಿಂಬಿಯ ವ್ಯಾಸ ಕಾಂತಕ್ಷೇತ್ರದ ಬಲ ಮತ್ತು ವ್ಯಾಪ್ತಿಯ ಮೇಲೆ ಹೆಚ್ಚು ಪರಿಣಾಮವನ್ನು ಬೀರುತ್ತವೆ. ಚಿತ್ರಗಳು ಹೆಚ್ಚು ನಾಭಿದೂರ ಮತ್ತು ಕಡಿಮೆ ನಾಭಿದೂರದ ಕಾಂತ ಮಸೂರಗಳನ್ನು ತೋರಿಸುತ್ತವೆ.
ಪ್ರತಿಬಿಂಬದ ದೋಷಗಳು: ಕಾಂತ ಮತ್ತು ಸ್ಥಿರ ವಿದ್ಯುತ್ ಕ್ಷೇತ್ರಗಳು ಎಲೆಕ್ಟ್ರಾನ್ ಮಸೂರಗಳಂತೆ ವರ್ತಿಸುವುದನ್ನು ತಿಳಿಯಲು ಉಪಾಕ್ಷಕಿರಣಗಳನ್ನು ಮಾತ್ರ ಗಮನದಲ್ಲಿಟ್ಟುಕೊಳ್ಳಲಾಗಿದೆ. ಈ ಸ್ಥಿತಿ ಇಲ್ಲದಿದ್ದರೆ ಪ್ರತಿಬಿಂಬದಲ್ಲಿ ಅನೇಕ ದೋಷಗಳಿರುತ್ತವೆ. ದ್ಯುತಿ ಮಸೂರಗಳಿಂದ ಮೂಡುವ ಪ್ರತಿಬಿಂಬದಲ್ಲಿನ ಐದು ದೋಷಗಳೂ ಸ್ಥಿರ ವಿದ್ಯುತ್ ಮಸೂರದಿಂದ ಮಾಡುವ ಪ್ರತಿಬಿಂಬದಲ್ಲಿರುತ್ತವೆ.  ಇವುಗಳಲ್ಲದೆ ಕಾಂತಮಸೂರಗಳಿಂದ ಮೂಡುವ ಪ್ರತಿಬಿಂಬದಲ್ಲಿ ಬೇರೆ ದೋಷಗಳೂ ಇರುತ್ತವೆ. ಹೆಚ್ಚಿನ ದೋಷಗಳು ಪ್ರತಿಬಿಂಬ ತಿರುಗುವುದರಿಂದ ಹುಟ್ಟಿಕೊಳ್ಳುತ್ತವೆ.

ಚಿತ್ರ-9

(1) ಗೋಳವಿಪಥನ: ಅಕ್ಷದಿಂದ ಹೆಚ್ಚು ದೂರದಲ್ಲಿ ಮಸೂರವನ್ನು ತಲುಪುವ ಎಲೆಕ್ಟ್ರಾನುಗಳು ಹೆಚ್ಚು ಬಾಗುತ್ತವೆ. ಆದ್ದರಿಂದ ಅಕ್ಷದ ಮೇಲಿನ ಒಂದು ಬಿಂದು ಬಲಗಡೆ ಪ್ರತಿಬಿಂಬದಲ್ಲಿ ವೃತ್ತವಾಗಿ ಹರಡಿಕೊಳ್ಳುತ್ತದೆ. ಇದರ ತ್ರಿಜ್ಯ ಗೆ ಸರಿಗಟ್ಟಿ ವ್ಯತ್ಯಾಸವಾಗುತ್ತದೆ. ವಸ್ತುವಿನ ಪ್ರತಿಯೊಂದು ಬಿಂದುವೂ ಹೀಗೆ ಪ್ರತಿಬಿಂಬದಲ್ಲಿ ವಿಸ್ತøತ ವೃತ್ತವಾಗಿ ಹರಡಿಕೊಳ್ಳುತ್ತದೆ. ಈ ದೋಷವನ್ನು ಗೋಳವಿಪಥನ ಎನ್ನುತ್ತಾರೆ. ಎಲೆಕ್ಟ್ರಾನ್ ಸೂಕ್ಷ್ಮದರ್ಶಿಗಳಲ್ಲಿ ಬಳಸುವ ಕಾಂತ ಮತ್ತು ಸ್ಥಿರವಿದ್ಯುತ್ ಮಸೂರಗಳು ಅಭಿಸರಿಸುವ (ಕನ್ವರ್ಜಿಂಗ್) ಮಸೂರಗಳಾದ್ದರಿಂದ ಗೋಳವಿಪಥನವನ್ನು ಸಂಪೂರ್ಣವಾಗಿ ನಿವಾರಿಸಲು ಆಗುವುದೇ ಇಲ್ಲ. ಇದು ಎಲೆಕ್ಟ್ರಾನ್ ಸೂಕ್ಷ್ಮದರ್ಶಿಯ ವಿಘಟನ ಸಾಮಥ್ರ್ಯವನ್ನು ನಿಯಂತ್ರಣಗೊಳಿಸುತ್ತದೆ.

ಚಿತ್ರ-10

ಚಿತ್ರ-11

(2) ಕೋಮ: ಇದು ಎರಡನೆಯ ದೋಷ. ಅಕ್ಷಕ್ಕೆ ದೂರವಾಗಿರುವ ಪ್ರತಿಯೊಂದು ಬಿಂದು ಪ್ರತಿಬಿಂಬದಲ್ಲಿ ಧೂಮಕೇತು ರೂಪ ತಾಳುವುದರಿಂದ ಈ ದೋಷಕ್ಕೆ ಕೋಮ ಎಂದು ಹೆಸರು ಬಂದಿದೆ. ಎಲೆಕ್ಟ್ರಾನ್ ಸೂಕ್ಷ್ಮದರ್ಶಿಯಲ್ಲಿ ಕೋಮ ಅಷ್ಟು ಪ್ರಮುಖವಾದ ದೋಷವಲ್ಲ. ಪ್ರತಿಬಿಂಬೀಕರಣಗೊಳ್ಳುವ ವಸ್ತು ಅಕ್ಷದ ಅತಿ ಸಮೀಪದ ಪ್ರದೇಶಕ್ಕೆ ಸೀಮಿತಗೊಂಡಿರುತ್ತದೆ.

ಚಿತ್ರ-12-1

(3) ವಿಕೃತ(ಡಿಸ್ಟಾರ್ಶನ್): ಅಕ್ಷದಿಂದ ತ್ರಿಜ್ಯದಲ್ಲಿ ದೂರಹೋದಂತೆ ಪ್ರತಿಬಿಂಬದ ಲಂಬನ ಹೆಚ್ಚು ಇಲ್ಲವೆ ಕಡಿಮೆಯಾಗುವ ಸಾಧ್ಯತೆಯಿದೆ. ಇದನ್ನು ಅನುಸರಿಸಿ ಕ್ರಮವಾಗಿ ಪಿನ್‍ವಿಕೃತ ಮತ್ತು ಪಿಪಾಯಿವಿಕೃತಗಳುಂಟಾಗುತ್ತವೆ. ಕಾಂತ ಮಸೂರಗಳಲ್ಲಿ ಇವುಗಳೊಂದಿಗೆ ತಿರುಗು ವಿಕೃತವೂ ಇರುತ್ತದೆ. ಈ ದೋಷಗಳು ಎಲೆಕ್ಟ್ರಾನ್ ಸೂಕ್ಷ್ಮದರ್ಶಿಯ ಪ್ರತಿಬಿಂಬಗಳಲ್ಲಿ ಕಾಣಿಸಿಕೊಳ್ಳುತ್ತವಾದರೂ ಅವುಗಳಿಂದ ಅಂಥ ತೊಂದರೆ ಏನೂ ಆಗುವುದಿಲ್ಲ. 

ಚಿತ್ರ-12-2

(4) ಆಸ್ಟಿಗ್ಮ್ಯಾಟಿಸಮ್: ಅಕ್ಷದಿಂದ ದೂರವಿರುವ ಒಂದು ವಸ್ತುಬಿಂದುವಿನಿಂದ ಹೊರಟ ಎಲೆಕ್ಟ್ರಾನುಗಳು ಪ್ರತಿಬಿಂಬ ಮೂಡುವಲ್ಲಿ ಪರಸ್ಪರ ಲಂಬವಾಗಿರುವ ಎರಡು ಗೆರೆಗಳ ಮೇಲೆ ಬಂದು ಸೇರುತ್ತವೆ. ಸ್ಪಷ್ಟವಾದ ಪ್ರತಿಬಿಂಬಬಿಂದು ಯಾವ ಗೆರೆಯ ಮೇಲೂ ಕಾಣುವುದಿಲ್ಲ. ಈ ದೋಷವನ್ನು ಆಸ್ಟಿಗ್ಮ್ಯಾಟಿಸಮ್ ಎನ್ನುತ್ತಾರೆ. ಇದರ ಪರಿಣಾಮವೆಂದರೆ ಪ್ರತಿಬಿಂಬತಲದಲ್ಲಿ ಗೊಂದಲಪಡಿಸುವ ವೃತ್ತ. ಅಕ್ಷದಿಂದ ವಸ್ತುಬಿಂದು ದೂರವಾದಷ್ಟೂ ಈ ಗೊಂದಲವೃತ್ತ ದೊಡ್ಡದಾಗುತ್ತದೆ. ಅಕ್ಷದ ಮೇಲೆ ಇಂಥ ಗೊಂದಲವೃತ್ತ ಮೂಡುವುದಿಲ್ಲ. ಎಲೆಕ್ಟ್ರಾನ್ ಸೂಕ್ಷ್ಮದರ್ಶಿಯಲ್ಲಿ ಈ ದೋಷ ಗಣನೀಯವಾದುದಲ್ಲ.

ಚಿತ್ರ-13

(5) ವರ್ಣವಿಪಥನ (ಕ್ರೊಮ್ಯಾಟಿಕ್ ಆಬೆರೇಷನ್): ಭರ ಎಲೆಕ್ಟ್ರಾನ್ ಮತ್ತು ಮಂದ ಎಲೆಕ್ಟ್ರಾನುಗಳು ಒಂದೇ ನಾಭಿಗೆ ಬರುವುದಿಲ್ಲ. ಆದ್ದರಿಂದ ಒಂದೇ ಬಿಂದುವಿನಿಂದ ಹೊರಡುವ ಬೇರೆ ಬೇರೆ ವೇಗದ ಎಲೆಕ್ಟ್ರಾನುಗಳು ಆ ಬಿಂದುವಿನ ಪ್ರತಿಬಿಂಬವನ್ನು ಹರಡುತ್ತದೆ.

ಚಿತ್ರ-14

	ಈ ದೋಷವನ್ನು ವರ್ಣವಿಪಥನ ಎನ್ನುತ್ತಾರೆ. ಕಾಂತಮಸೂರದಲ್ಲಿ ಪ್ರತಿಬಿಂಬ ತಿರುಗುವುದರಿಂದ ವರ್ಣೀಯ (ಕ್ರೊಮ್ಯಾಟಿಕ್) ತಿರುಗುದೋಷವೂ ಕಾಣಿಸಿಕೊಳ್ಳುತ್ತದೆ. ಈ ದೋಷಗಳನ್ನು ಕಡಿಮೆಮಾಡಲು ಎಲೆಕ್ಟ್ರಾನುಗಳ ವೇಗೋತ್ಕರ್ಷಕ್ಕೆ ಉಪಯೋಗಿಸುವ ವಿಭವಾಂತರದಲ್ಲಿ ವ್ಯತ್ಯಾಸವಾಗದಂತೆ ನೋಡಿಕೊಳ್ಳಬೇಕು.
(6) ಕ್ಷೇತ್ರದ ವಕ್ರತೆ: ಮಸೂರದಲ್ಲಿ ಎಲ್ಲ ಭಾಗಗಳ ನಾಭಿದೂರ ಒಂದೇ ಆಗಿರುವುದಿಲ್ಲ. ಆದ್ದರಿಂದ ಒಂದು ಸಮತಲದ ಪ್ರತಿಬಿಂಬ ವಕ್ರವಾಗುತ್ತದೆ. ಈ ದೋಷವನ್ನು ಕ್ಷೇತ್ರದ ವಕ್ರತೆ ಎನ್ನುತ್ತಾರೆ. ವಸ್ತುವಿನ ವಿಸ್ತಾರ ಹೆಚ್ಚಾದರೆ ವಕ್ರತೆಯೂ ಹೆಚ್ಚಾಗುತ್ತದೆ. ಎಲೆಕ್ಟ್ರಾನ್ ಸೂಕ್ಷ್ಮದರ್ಶಿಯಲ್ಲಿ ಈ ದೋಷ ತೀರ ಕಡಿಮೆ.

ಚಿತ್ರ-15

ಚಿತ್ರ-16

 (7) ಆಕಾಶ ವಿದ್ಯುದಂಶದ ಪರಿಣಾಮ (ಸ್ವೇಸ್ ಚಾರ್ಜ್ ಎಫೆಕ್ಟ್): ಎಲೆಕ್ಟ್ರಾನುಗಳು ಪರಸ್ವರ ವಿಕರ್ಷಗೊಳ್ಳುತ್ತವೆ. ಆದ್ದರಿಂದ ಒಂದು ಎಲೆಕ್ಟ್ರಾನ್ ಕಿರಣ ಮುಂಬರಿದಂತೆಲ್ಲ ವಿಸ್ತಾರವಾಗುತ್ತ ಹೋಗುತ್ತದೆ. ಇದನ್ನು ಚಿತ್ರದಲ್ಲಿ ಕಾಣಬಹುದು. ಹೆಚ್ಚು ಎಲೆಕ್ಟ್ರಾನ್ ಸಾಂದ್ರತೆಯಿರುವ ಕಿರಣಗಳಲ್ಲಿ ಹರಡುವಿಕೆ ಹೆಚ್ಚಾಗಿರುತ್ತದೆ. ಈ ದೋಷವನ್ನು ಆಕಾಶ ವಿದ್ಯುದಂಶದ ಪರಿಣಾಮ ಎನ್ನುತ್ತಾರೆ. ಎಲೆಕ್ಟ್ರಾನ್ ಸೂಕ್ಷ್ಮದರ್ಶಿಗಳಲ್ಲಿ ಎಲೆಕ್ಟ್ರಾನುಗಳ ವೇಗ ಹೆಚ್ಚಾಗಿರುವುದರಿಂದಲೂ ಕಿರಣಗಳಲ್ಲಿ ಸಾಂದ್ರತೆ ಕಡಿಮೆಯಿರುವುದರಿಂದಲೂ ಈ ದೋಷ ಅಷ್ಪಾಗಿ ಕಾಣಿಸಿಕೊಳ್ಳುವುದಿಲ್ಲ.			
	(ಎಸ್.ಎ.ಎಚ್.)